ಸಹಾಯಕ್ಕಾಗಿ (#9424)

ಓ ನನ್ನ ಪರಮಾತ್ಮನೇ! ನಿನ್ನ ಖ್ಯಾತಿಯ ನಾಮದಿಂದ ನಾನು ನಿನ್ನಲ್ಲಿ ಪ್ರಾರ್ಥಿಸುವುದಿಷ್ಟೆ, ನಿನ್ನ ಸೇವಕರ ವಿಚಾರಗಳಲ್ಲಿ ಏಳಿಗೆಯನ್ನುಂಟುಮಾಡು;  ನಿನ್ನ ಪ್ರದೇಶಗಳು ಅಭಿವೃದ್ಧಿಗೊಳ್ಳುವಂತೆ ಮಾಡು; ವಾಸ್ತವವಾಗಿ ಜಗತ್ತಿನ ಎಲ್ಲ ವಸ್ತುಗಳ ಮೇಲೂ ನಿನಗೆ ಪರಮಾಧಿಕಾರ ಉಂಟು.

-Bahá'u'lláh
-----------------------

ಸಹಾಯಕ್ಕಾಗಿ (#9425)

“ಪ್ರತಿಯೊಂದು ಪರಿಸ್ಥಿತಿಗಳಲ್ಲೂ ಸಹನೆಯಿಂದಿರಿ ಮತ್ತು ನಿಮ್ಮ ಸಂಪೂರ್ಣ ಭರವಸೆ ಹಾಗೂ ವಿಶ್ವಾಸವನ್ನು ದೇವರ ಮೇಲಿಡಿ.”

-Bahá'u'lláh
-----------------------

ಸಹಾಯಕ್ಕಾಗಿ (#9426)

ಪರಮಾತ್ಮನಲ್ಲದೆ ಕಷ್ಟನಿವಾರಕ ಮತ್ತ್ಯಾರಿದ್ದಾರೆ? ಪರಮಾತ್ಮನೆ ಘನವಂತ ಎಂದೆನ್ನು. ಅವನೇ ದೇವರು ಎಂದು ಘೋಷಿಸು. ಎಲ್ಲರೂ ಅವನ ಸೇವಕರು ಆಜ್ಞಾಧಾರಕರು ಎಂದು ನುಡಿ.    - ಬಾಬ್
ಹೇಳು: ಪರಮಾತ್ಮನೇ ಎಲ್ಲರಿಗೂ ಅವಶ್ಯವಾದುದನ್ನು ಒದಗಿಸುವವನು. ಅಲ್ಲದೆ ಎಲ್ಲರ ಮೇಲೂ ವ್ಯಾಪ್ತಿಯುಳ್ಳವನು. ಸ್ವರ್ಗದಲ್ಲಾಗಲೀ, ಅಥವಾ ಪೃಥ್ವಿಯಲ್ಲಾಗಲೀ ಪರಮಾತ್ಮನ ವ್ಯಾಪ್ತಿಗೆ ಅತೀತವಾದುದು ಯಾವುದೂ ಇಲ್ಲ.  ಅರಿತವನೂ, ಆಧಾರಿಯೂ, ಸರ್ವಶಕ್ತನೂ ಆದ ಅವನು ನಿಜಕ್ಕೂ ತನ್ನೊಳಗೇ ಅಡಗಿರುವನು.              - ಬಾಬ್
ಪ್ರಭುವೇ, ಆರ್ತರು ನಾವು ಪ್ರೀತಿಯ ಕೊಡುಗೆ ನೀಡು, ದಯೆತೋರು ನಿನ್ನ ಸಂಪತ್ತಿನ ಮಹಾ ಸಾಗರದಲ್ಲಿ ಅಗತ್ಯವಿರುವ ನಮಗೆ ಪಾಲು ದೊರಕಿಸು.  ಕೀಳಾಗಿಸಲ್ಪಟ್ಟಿರುವ ನಮ್ಮನ್ನು ಸಂತೈಸು, ನಿನ್ನ ಕೀರ್ತಿಗೆ ನಮ್ಮನ್ನು ಭಗಸ್ಥರನ್ನಾಗಿ ಮಾಡು.  ಆಕಾಶದ ಪಕ್ಷಿಗಳೂ ತಮ್ಮ ಆಹಾರವನ್ನು ದಿನಂಪ್ರತಿ ನಿನ್ನಿಂದ ಪಡೆಯುವುವು. ಎಲ್ಲ ವಸ್ತುಗಳೂ, ಜೀವಿಗಳೂ ನಿನ್ನ ಲಕ್ಷ್ಯ ಹಾಗೂ ಪ್ರೇಮಮಯವಾದ ಪ್ರೀತಿಯ ಆಸರೆಯಲ್ಲಿರುವುವು.  ಈ ಅಶಕ್ತನನ್ನು ನಿನ್ನ ಅಗಾಧ ಕರುಣೆಯಿಂದ ದೂರಗೊಳಿಸಬೇಡ.  ಈ ನಿಸ್ಸಹಾಯಕ ಆತ್ಮವನ್ನು ನಿನ್ನ ಉದಾರತೆಯಿಂದ ರಕ್ಷಿಸುವ ಭರವಸೆ ನೀಡು.
ನಮ್ಮ ದೈನಂದಿನ ಆಹಾರವನ್ನು ಒದಗಿಸು ಜೀವನದ ಅವಶ್ಯಕತೆಗಳನ್ನು ಹೆಚ್ಚಿಸುವಲ್ಲಿ ಕೃಪೆಮಾಡು ನಿನ್ನನ್ನಲ್ಲದೆ ಬೇರೆಯವರನ್ನು ಅವಲಂಬಿಸದಂತೆ, ನಿನ್ನೊಡನೆ ಸಂಪೂರ್ಣವಾಗಿ ಸಂಪರ್ಕವಿರುವಂತೆ ನಿನ್ನ ಮಾರ್ಗನುಯಾಯಿಯಾಗುವಂತೆ, ಹಾಗೂ ನಿನ್ನ ಸರ್ವಶಕ್ತ, ಪ್ರೇಮಮಯಿ, ಮಾನವ ಕೋಟೆಯ ಇಷ್ಟಾರ್ಥವನ್ನು ಪೂರೈಸುವವನು.

-`Abdu'l-Bahá
-----------------------

ಸಹಾಯಕ್ಕಾಗಿ (#9427)

ಓ ಪ್ರಭುವೇ, ನನ್ನ ದೇವರೇ!  ನಿನ್ನನ್ನು ಪ್ರೀತಿಸುವವರಲ್ಲಿ ನಿನ್ನ ಬಗ್ಗೆ, ವಿಶ್ವಾಸ ದೃಢವಾಗಿರುವಂತೆ ಸಹಾಯವೆಸುಗು. ಅಷ್ಟು ಮಾತ್ರವಲ್ಲ ನಿನ್ನ ಮಾರ್ಗವನ್ನು ಅನುಸರಿಸುವಂತೆ, ನಿನ್ನ ಕಾರ್ಯದಲ್ಲಿ ನಿಷ್ಠೆಯಿಂದಿರುವಂತೆ ಅನುಗ್ರಹಿಸು.  ಸ್ವಾರ್ಥ ಹಾಗೂ ಮೋಹಪಾಶಗಳ ಹೊಡೆತವನ್ನು ಎದುರಿಸಲು ಸ್ಥೈರ್ಯ ನೀಡು.  ಭಗವಂತನ ದಿವ್ಯ ಮಾರ್ಗದರ್ಶನವನ್ನು ಹಿಡಿದು ಸಾಗಲು ಒತ್ತಾಸೆ ಕರುಣಿಸು, ನೀನು ಅತಿ ಬಲಶಾಲಿ, ಕರುಣಾಳು, ಸ್ವಯಂಪೂರ್ಣದಾತ, ದಯಾದ್ರ್ರಹೃದಯ, ಸರ್ವಶಕ್ತ, ಅತುಲ ಉದಾರಿ.

-`Abdu'l-Bahá
-----------------------

