ಮಧ್ಯರಾತ್ರಿ (#9469)

*(ಓ ಸತ್ಯಾನ್ವೇಷಕನೇ, ದೇವರು ನಿನ್ನ ಆಧ್ಯಾತ್ಮಿಕ ಕಣ್ಣುಗಳನ್ನು ತೆರೆಸಬೇಕೆಂದು ನೀಣು ಅಪೇಕ್ಷಿಸುವೆಯಾದರೆ ಅವನಲ್ಲಿ ಹಾಗೆ ಯಾಚಿಸು.  ಮಧ್ಯರಾತ್ರಿಯ ಮೇಲೆ ಅವನಲ್ಲಿ ತಲ್ಲೀನನಾಗಿ ಹೀಗೆ ಪ್ರಾರ್ಥಿಸು.)

ಓ ಪರಮಾತ್ಮನೇ, ನಿನ್ನ ಸರ್ವಾಂತರ್ಯಾಮಿತ್ವದೆಡೆಗೆ ನನ್ನ ಮುಖವನ್ನು ಹೊರಳಿಸಿರುವೆ.  ನಾನು ನಿನ್ನ ಕೃಪಾ ಸಾಗರದಲ್ಲಿ ಮುಳುಗಿಬಿಟ್ಟಿದ್ದೇನೆ. ಇಂದಿನ ಕಗ್ಗತ್ತಲೆಯ ರಾತ್ರಿಯಲ್ಲಿ ನಿನ್ನ ದಿವ್ಯ ಜ್ಯೋತಿಯ ಬೆಳಕು ಕಾಣಿಸುವಂತೆ ನನ್ನ ದೃಷ್ಟಿಯನ್ನು ಪ್ರಕಾಸಮಾನವಾಗಿಸು.  ಈ ಅದ್ಭುತ ಯುಗದಲ್ಲಿ ನಿನ್ನ ಪ್ರೇಮ ಸುಧೆಯಿಂದ ಸುಖಿಯನ್ನಾಗಿ ಮಾಡು.  ಓ ಪ್ರಭುವೇ, ನಿನ್ನ ಕರೆಯನ್ನು ಲಾಲಿಸುವಂತೆ ಎಸಗು.  ನಿನ್ನ ಸ್ವರ್ಗದ ಬಾಗಿಲನ್ನು ನನ್ನೆದುರು ತೆರೆಯುವಂತೆ ಮಾಡು.  ನಿನ್ನ (ಬಹ) ಪ್ರತಿಭೆಯ ಜ್ಯೋತಿಯನ್ನು ಕಾಣುವಂತೆ ನನ್ನ ಈ ಮೊರೆಯನ್ನು ಲಾಲಿಸು.  ಅಷ್ಟೇ ಅಲ್ಲ, ನಿನ್ನ ಸೌಂದರ್ಯದತ್ತ ಆಕರ್ಷಕನಾಗುವಂತೆ ಕೃಪೆಮಾಡು.   ನಿಜಕ್ಕೂ ನೀನು ದಾತ, ಉದಾರಿ, ಕರುಣಾಳು ಮತ್ತು ಕ್ಷಮಾಶೀಲ.

-`Abdu'l-Bahá
-----------------------

