ಮಕ್ಕಳಿಗಾಗಿ (#9428)

ನೀನು ಪ್ರಶಂಸಿಸಲ್ಪಡಲಿ, ಓ ಪ್ರಭುವೇ ನನ್ನ ದೇವರೇ ಈ ಶಿಶುವು ನಿನ್ನ ಕೋಮಲವಾದ ಕರುಣೆ ಹಾಗೂ ಪ್ರೇಮಾನುಗ್ರಹದ ವಕ್ಷ ಸ್ಥಳದಿಂದ ಪೋಷಿಸಲ್ಪಡುವಂತೆಯೂ ಮತ್ತು ನಿನ್ನ ದಿವ್ಯ ವೃಕ್ಷಗಳ ಫಲಗಳಿಂದ ಪುಷ್ಟೀಕರಿಸಲ್ಪಡುವಂತೆಯೂ ಅನುಗ್ರಹಿಸು.  ಅವನನ್ನು ನಿನ್ನನಲ್ಲದೆ ಬೇರೊಬ್ಬರ ರಕ್ಷಣೆಗೆ ಒಳಗಾಗುವ ತೊಂದರೆಯಿಂದ ತಪ್ಪಿಸು.  ಏಕೆಂದರೆ, ನೀನೇ, ನಿನ್ನ ಸಾರ್ವಭೌಮತೆಯ ಇಚ್ಛಾಶಕ್ತಿ ಮತ್ತು ಸಾಮಥ್ರ್ಯದ ಮೂಲಕ, ಅವನನ್ನು ಸೃಜಿಸಿ ಅಸ್ತಿತ್ವಕ್ಕೆ ತಂದಿರುವೆ.  ಸರ್ವ ಸಮರ್ಥನೂ, ಸರ್ವಜ್ಞನೂ ಆಗಿರುವ ನೀನಲ್ಲದೆ ಬೇರೆ ದೇವರಿಲ್ಲ.  
ನೀನು ಸ್ತುತ್ಯಾರ್ಹನು, ಓ ನನ್ನ ಪರಮ ಶ್ರೇಷ್ಥ ಪ್ರಿಯತಮನೇ, ಅವನ ಮೇಲೆ ನಿನ್ನ ಮಧುರವಾದ ಪರಿಮಳದ ಉತ್ಕೃಷ್ಟ ಔದಾರ್ಯ ಹಾಗೂ ಪವಿತ್ರ ಕೊಡುಗೆಯ ಕಂಪನ್ನು ಬೀರು. ನಂತರ ಎಲ್ಲಾ ನಾಮ ಮತ್ತು ಗುಣಗಳ ಸಾಮ್ರಾಜ್ಯವನ್ನೇ ತನ್ನ ವಶದಲ್ಲಿಟ್ಟುಕೊಂಡಿರುವ, ನಿನ್ನ ಪರಮೋನ್ನತ ನಾಮದ ನೆರಳಿನಡಿಯಲ್ಲಿ ಆಶ್ರಯವನ್ನು ಕೋರುವಂತೆ ಮಾಡು.  ಸತ್ಯವಾಗಿಯೂ, ನೀನು ಏನನ್ನು ಮಾಡಲು ಇಚ್ಛಿಸುವೆಯೋ ಅದನ್ನು ಮಾಡಲು ನೀನು ಸಮರ್ಥನು. ನಿಶ್ಚಯವಾಗಿಯೂ ನೀನು ಮಹಿಮಾನ್ವಿತನೂ, ಉನ್ನತನೂ, ಸರ್ವದಾ ಕ್ಷಮಾದಾತನೂ, ದಯಾಪರನೂ, ಕೊಡುಗೈ ದಾನಿಯೂ, ಕೃಪಾಳುವೂ ಆಗಿರುವೆ.

-Bahá'u'lláh
-----------------------

ಮಕ್ಕಳಿಗಾಗಿ (#9429)

ಓ ಅಪ್ರತಿಮ ಪ್ರಭುವೇ! ಈ ಹಾಲೂಡುವ ಹಸುಗೂಸು ನಿನ್ನ ಪ್ರೇಮಪೂರಿತ ದಯೆಯ ಎದೆ ಹಾಲಿನಿಂದ ಪೋಷಿಸಲ್ಪಡಲಿ, ನಿನ್ನ ಸುರಕ್ಷತೆ, ಮತ್ತು ರಕ್ಷಣೆಯ ತೊಟ್ಟಿಲಿನಲ್ಲೆ ಅದನ್ನು ಕಾಪಾಡು ಹಾಗೂ ಅದು ನಿನ್ನ ಸುಕೋಮಲ ಮಮತೆಯ ತೋಳುಗಳಲ್ಲಿ ಬೆಳೆಯುವಂತೆ ಅನುಗ್ರಹಿಸಿ.

-`Abdu'l-Bahá
-----------------------

ಮಕ್ಕಳಿಗಾಗಿ (#9430)

ಓ ಭಗವಂತನೇ! ನಿನ್ನ ಪ್ರೀತಿಯ ಹೃದಯಾಂತರಾಳದಲ್ಲಿ ಈ ಶಿಶುವನ್ನು ಬೆಳೆಸು ಮತ್ತು ನಿನ್ನ ಅನುಗ್ರಹದ ಎದೆ ಹಾಲನ್ನುಣಿಸಿ.  ನಿನ್ನ ಪ್ರೇಮದ ಗುಲಾಬಿ ಹೂ ತೋಟದಲ್ಲಿ ಈ ಹೊಸ ಸಸಿಯನ್ನು ಹಸನುಮಾಡು ಮತ್ತು ನಿನ್ನ ಉದಾರತೆಯ ಸುರಿಮಳೆಯಿಂದ ಅದು ಬಲಿಯುವಂತೆ ನೆರವಾಗು.  ಅದನ್ನು ನಿನ್ನ ಸಾಮ್ರಾಜ್ಯದ ಶಿಶುವಂತೆ ಮಾಡು ಮತ್ತು ನಿನ್ನ ದಿವ್ಯಲೋಕಕ್ಕೆ ಅದನ್ನು ಕರೆದೊಯ್ಯು, ನೀನು ಬಲಶಾಲಿ ಹಾಗೂ ದಯಾಮಯ ಆಗಿರುವೆ.  ನೀನು ದಾನಿ, ಉದಾರಿ ಅತಿಶಯ ಉದಾರತೆಯ ಪ್ರಭು.

-`Abdu'l-Bahá
-----------------------

ಮಕ್ಕಳಿಗಾಗಿ (#9431)

ಓ ಭಗವಂತ, ನನಗೆ ಮಾರ್ಗದರ್ಶನ ನೀಡು. ನನ್ನನ್ನು ರಕ್ಷಿಸು, ನನ್ನ ಹೃದಯ ದೀವಿಗೆಯನ್ನು ಪ್ರಜ್ವಲಿಸು, ನನ್ನನ್ನು ದೇದೀಪ್ಯಮಾನವಾದ ನಕ್ಷತ್ರದಂತೆ ಮಾಡು.  ನೀನು ಅಪಾರ ಶಕ್ತ ಹಾಗೂ ಬಲಾಢ್ಯ.

-`Abdu'l-Bahá
-----------------------

ಮಕ್ಕಳಿಗಾಗಿ (#9432)

ಓ ದೇವರೇ! ಈ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡು ಈ ಮಕ್ಕಳು ನಿನ್ನ ಹಣ್ಣಿನ ತೋಟದಲ್ಲಿನ ಸಸಿಗಳು; ನಿನ್ನ ಹುಲ್ಲುಗಾವಲಿನಲ್ಲಿಯ ಹೂಗಳು, ನಿನ್ನ ಉದ್ಯಾನದ ಗುಲಾಬಿಗಳು, ನಿನ್ನ ವರ್ಷಧಾರೆ ಅವುಗಳ ಮೇಲೆ ಬೀಳಲಿ; ನೈಜತೆಯ ಸೂರ್ಯ ನಿನ್ನ ಪ್ರೇಮದೊಡನೆ ಅವುಗಳ ಮೇಲೆ ಪ್ರಕಾಶವನ್ನು ಬೀರಲಿ.  ಅವು ತರಬೇತಿಗೊಂಡು, ಸಮೃದ್ಧವಾಗಿ ಬೆಳೆದು, ಅತ್ಯಂತ ರಮ್ಯತೆಯಿಂದ ಕಾಣುವಂತಾಗಲೂ ನಿನ್ನ ತಂಪುಗಾಳಿ ಅವುಗಳ ಮೆಲೆ ಬೀಸಲಿ. ನೀನು ಪ್ರದಾಯಕ, ನೀನು ಕರುಣಾಶಾಲಿ. -  ಅಬ್ದುಲ್ ಬಹಾ
ಓ ಕರುಣಾಳು ಪ್ರಭುವೇ!  ಈ ಸುಂದರ ಮಕ್ಕಳು ನಿನ್ನ ಬಲಿಷ್ಟವಾದ ಬೆರಳುಗಳಿಂದ ಸೃಷ್ಟಿಯಾಗಿವೆ.  ಹಾಗೂ ನಿನ್ನ ಶ್ರೇಷ್ಟತೆಯ ಅದ್ಭುತವಾದ ಚಿಹ್ನೆಗಳಾಗಿವೆ.  ಓ ದೇವರೇ! ಈ ಮಕ್ಕಳನ್ನು ರಕ್ಷಿಸು, ಅವರು ಶಿಕ್ಷಣ ಪಡೆಯುವಂತೆ ಉದಾರವಾಗಿ ಸಹಕರಿಸು.  ಮತ್ತು ಮಾನವ ಪ್ರಪಂಚಕ್ಕೆ ಸೆವೆ ಸಲ್ಲಿಸುವಂತೆ ಅವರನ್ನು ಶಕ್ತಗೊಳಿಸು.  ಓ ದೇವರೇ! ಈ ಮಕ್ಕಳು ಮುತ್ತುಗಳು, ಅವರು ನಿನ್ನ ಪ್ರೇಮಭರಿತ ದಯೆಯೆಂಬ ಚಿಪ್ಪಿನಲ್ಲಿ ರಕ್ಷಿಸಲ್ಪಡುವಂತೆ ಮಾಡು.  ನೀನು ಉದಾರಿಯೂ, ಸರ್ವಪ್ರೇಮಿಯೂ ಆಗಿರುವೆ.   – ಅಬ್ದುಲ್ಬಹಾ.
ಓ ನನ್ನ ಪ್ರಭುವೇ! ಓ ನನ್ನ ಪ್ರಭುವೇ!
ನಾನೊಂದು ಏಳೆವಯಸ್ಸಿನ ಮಗು, ನಿನ್ನ  ಕರುಣೆಯ ಮೊಲೆಯಿಂದ ನನ್ನನ್ನು ಪೋಷಿಸು, ನಿನ್ನ ಪ್ರೀತಿಯ ವಕ್ಷ ಸ್ಥಳದಲ್ಲಿ ನನ್ನನ್ನು ತರಬೇತುಗೊಳಿಸು, ನಿನ್ನ ಮಾರ್ಗದರ್ಶನದ ಶಾಲೆಯಲ್ಲಿ ನನಗೆ ಶಿಕ್ಷಣ ನೀಡು ಮತ್ತು ನಿನ್ನ ಔದಾರ್ಯದ ನೆರಳಿನಾಶ್ರಯದಲ್ಲಿ ನನ್ನನ್ನು ವಿಕಸಿಸು, ಕತ್ತಲೆಗಳಿಂದ ನನ್ನನ್ನು ಮುಕ್ತಿಗೊಳಿಸು, ನನ್ನನ್ನು ಪ್ರಕಾಶಮಾನವಾದ ದೀಪವನ್ನಾಗಿ ಮಾಡು; ನನ್ನನ್ನು ದುಃಖದಿಂದ ಬಿಡುಗಡೆಗೊಳಿಸು, ನನ್ನನ್ನು ಗುಲಾಬಿ ತೋಟದಲ್ಲಿನ ಒಂಡು ಹೂವಿನಂತೆ ಮಾಡು; ನಿನ್ನ ಹೊಸ್ತಿಲಲ್ಲಿ ಸೇವಕನಾಗುವಂತೆ ಕಷ್ಟವನ್ನು ದಯಪಾಲಿಸು ಹಾಗೂ ಧರ್ಮಶೀಲರ ಸ್ವಭಾವ ಮತ್ತು ಗುಣಲಕ್ಷಣವನ್ನು ನನ್ನ ಮೇಲೆ ಕರುಣಿಸು; ಮಾನವ ಪ್ರಪಂಚಕ್ಕೆ ಔದಾರ್ಯದ ಕಾರಣವನ್ನಾಗಿ ಮಾಡು ಮತ್ತು ಅಮರ ಜೀವನದ ಮುಕುಟದಿಂಡ ನನ್ನ ಶಿರಸ್ಸನ್ನು ಅಲಂಕರಿಸು.  ಸತ್ಯವಾಗಿಯೂ, ನೀನೇ ಶಕ್ತಿಶಾಲಿ, ಪರಾಕ್ರಮಿ, ದಿವ್ಯ ಜ್ಞಾನಿ, ಶ್ರೋತೃ.

-`Abdu'l-Bahá
-----------------------

ಮಕ್ಕಳಿಗಾಗಿ (#9433)

ಓ ಅತ್ಯಂತ ಮಹಿಮಾನ್ವಿತನಾದ ಪ್ರಭುವೇ! ಈ ನಿನ್ನ ಪುಟ್ಟ ಸೇವಕಿಯನ್ನು ಅನುಗ್ರಹಿತಳನ್ನಾಗಿ ಮತ್ತು ಸಂತುಷ್ಟಳನ್ನಾಗಿ ಮಾಡು; ನಿನ್ನ ಏಕತೆಯ ಹೊಸ್ತಿಲಲ್ಲಿ ಸಾಕಲ್ಪಡುವಂತೆ ಮಾಡು ಹಾಗೂ ನಿನ್ನ ಪ್ರೀತಿಯ ಬಟ್ಟಲಾಳದಿಂದ ಅವಳು ಪಾನ ಮಾಡುವಂತೆ ಮಾಡು. ಅದರಿಂದ ಅವಳು ಭಾವಾವೇಶ ಮತ್ತು ಅತ್ಯಾನಂದಭರಿತಳಾಗಿ ಸುಮಧುರ ಸುಗಂಧವನ್ನು ಬೀರಬಹುದು.  ನೀನೇ ಬಲಿಷ್ಠ ಹಾಗೂ ಪ್ರಬಲ ಮತ್ತು ನೀನೇ ಸರ್ವಜ್ಞ ಹಾಗೂ ಸರ್ವದರ್ಶಿ ಆಗಿರುವೆ.

-`Abdu'l-Bahá
-----------------------

ಮಕ್ಕಳಿಗಾಗಿ (#9434)

.
ಓ ದಯಾಮಯಿಯಾದ ಪ್ರಭುವೇ! ನಾನೊಂದು ಚಿಕ್ಕ ಮಗು.  ದೈವೀ ಸಾಮ್ರಾಜ್ಯದಲ್ಲಿ ನನ್ನನ್ನು ಸೇರಿಸಿಕೊಂಡು ನನ್ನನ್ನು ಉನ್ನತಿಗೇರಿಸು.  ನಾನು ಪ್ರಾಪಂಚಿಕದವನಾಗಿರುವೆ.  ನನ್ನನ್ನು ಸ್ವರ್ಗಿಯದವನನ್ನಾಗಿಸು, ನಾನು ಈ ಕೆಳಗಿನ ಲೋಕದವನು, ನಾನು ಮೇಲಿನ ಲೋಕದವನಾಗಿರುವಂತೆ ಮಾಡು; ಮಬ್ಬಾಗಿರುವೆ, ನಾನು ಪ್ರಕಾಶಮಾನವಾಗಲು ಶ್ರಮಿಸುವಂತೆ ಮಾಡುಅ;  ಭೌತಿಕ, ನನ್ನನ್ನು ಧಾರ್ಮಿಕನನ್ನಾಗಿಸು ಹಾಗೂ ನಾನು ನಿನ್ನ ಅಪರಿಮಿತ ಔದಾರ್ಯಗಳನ್ನು ಪ್ರಕಟಿಸುವಂತೆ ದಯಪಾಲಿಸು,  ನೀನು ಬಲಾಡ್ಯ, ಎಲ್ಲವನ್ನೂ ಪ್ರೀತಿಸುವವ.

-`Abdu'l-Bahá
-----------------------

