ಬೋಧನೆಗಾಗಿ (#9489)

ಓ ಪ್ರಭು, ನನ್ನ ಭಗವಂತನೇ, ನೀನು ಪ್ರಶಂಸಾರ್ಹ ನಿನ್ನ ಕೋಮಲ ಕರುಣೆಯತ್ತ ನನ್ನ ದೃಷ್ಟಿ ನೆಟ್ಟಿರುವುದನ್ನು ನೀನು ಗಮಿನಿಸಿರುವೆ. ನಿನ್ನ  ದಿವ್ಯ ದಿಗಂತದತ್ತ ನನ್ನ ಕಣ್ಣುಗಳು ಬಾಗಿರುವುದನ್ನೂ ತಿಳಿದಿರುವೆ.  ಅಷ್ಟೇ ಅಲ್ಲ, ನಿನ್ನ ಕೊಡುಗೈ ಸ್ವರ್ಗದತ್ತ ನನ್ನ ಕೈಗಳು ಹೇಗೆ ಚಾಚಿವೆ ಎಂಬುದನ್ನೂ ಬಲ್ಲೆ.  ನೀನೇ ನನಗೆ ಸಾಕ್ಷಿ ನನ್ನ ಶರೀರದ ಪ್ರತಿಯೊಂದೂ ಅವಯವವೂ ನಿನ್ನಲ್ಲಿ ಗೋಳಿಡುತ್ತಾ ಹೀಗೆ ಹೇಳುವುದು: “ವಿಶ್ವದ ಪ್ರೀತಿ ಪಾತ್ರನಾದ ಹಾಗೂ ಸ್ವರ್ಗ ಮತ್ತು ಭೂಮಿಯಲ್ಲಿರುವ ಎಲ್ಲ ವಸ್ತುಗಳ ಮೇಲೂ ಪ್ರಭುವಾಗಿರುವೆ ಮತ್ತು ಭಕ್ತರಾಗಿರುವವರ ಅಂತರಂಗದ ಆಶೋತ್ತರದ ಪ್ರತಿಬಿಂಬವೂ ನೀನಾಗಿರುವೆ.  ಸ್ವರ್ಗ ಮತ್ತು ಭೂಮಿಯಲ್ಲಿ ವಾಸಿಸುವ ಎಲ್ಲರನ್ನೂ ನಿನ್ನ ಸಾಗರ ಸದೃಶ್ಯವಾದ ಕರುಣಾಕಟಾಕ್ಷಕ್ಕೆ ಆಹ್ವಾನಿಸಿ ಈ ಕರುಣೆಯ ಬೀಡಿಗೆ ದೂರವಾಗಿರಿಸಲ್ಪಟ್ಟು ದಡವನ್ನು ಮುಟ್ಟಲು ಆಸ್ವದವಿಲ್ಲದಂಟೆ ಮಾಡಲಾಗಿರುವ ನಿನ್ನ ಸೇವಕರಿಗೆ ಸಹಾಯವೆಸಗು.  ಓ ಪರಮಾತ್ಮನೇ, ಅವರನ್ನು ನಿನ್ನ ಸಂಪರ್ಕವಲ್ಲದೆ ಬೇರಾವುದರಿಂದಲೂ ಬೇರ್ಪಡಿಸು.  ನಿನ್ನ ಗುಣಗಾನ ಹಾಗೂ ಪ್ರಶಂಸೆ ಮಾಡುವಂತೆ ನೋಡು.  ಅಲ್ಲದೆ, ಓ ದೇವರೇ, ಅವರಿಗೆ ನಿನ್ನ ಕರುಣೆಯೆಂಬ ದ್ರಾಕ್ಷಾರಸವನ್ನು ಒದಗಿಸಿ ಆ ಮೂಲಕ ನಿನ್ನನ್ನಲ್ಲದೆ ಮಿಕ್ಕವರನ್ನು ಮರೆಯುವಂತೆಯೂ, ನಿನ್ನ ಧ್ಯೇಯೋದ್ದೇಶಗಳನ್ನು ಕುರಿತು ಸೇವೆ ಸಲ್ಲಿಸುವಂತೆಯೂ ಮತ್ತು ನಿನ್ನ ಬಗ್ಗೆ ಅವರು ಪ್ರೀತಿ, ನಿಷ್ಠೆಯಿಂದಿರುವಂತೆಯೂ ಅನುಗ್ರಹಿಸು.  ನಿಜಕ್ಕೂ ಅವರ ಜೀವಿತಗಳ ಮೇಲೆ ಅಧಿಪತಿ ನೀನಾಗಿದ್ದೀಯೇ.  ಅವರು ನಿನ್ನಿಂದ ತ್ಯಜಿಸಲ್ಪಟ್ಟರೆ ಅವರನ್ನು ನೋಡುವವರಾರು? ನಿನ್ನಿಂದ ದೂರಕ್ಕೆ ಸರಿಸಲ್ಪಟ್ಟರೆ ನಿನ್ನ ಸಾಮೀಪ್ಯಕ್ಕೆ ಬರಲು ಅವರಿಗೆ ಸಹಾಯ ನೀಡುವವರಾರು? ನಿನ್ನ ಶಕ್ತಿಯ ಬಗ್ಗೆ ನನಗೆ ಅಪಾರ ನಂಬಿಕೆಯಿದೆ.  ನಿನ್ನ ಬಳಿಯಲ್ಲದೆ ಬೇರೆಲ್ಲಿಯೂ ಸುಳಿಉಯುವ ನಿರಾಶ್ರಿತನನ್ನು ನಾಕಾಣೆ.  ನಿನ್ನ ರಕ್ಷಣೆಯಲ್ಲದೆ ಬೇರೆ ರಕ್ಷಣೆಯನ್ನು ಅರಸಲು ಶಕ್ಯವಿಲ್ಲ.  ನಿನ್ನ ಸುರಕ್ಷತೆಯಲ್ಲದೆ ಬೇರೆ ಯಾವ ಸುರಕ್ಷತೆಯೂ ಇಲ್ಲ.  ನಿನ್ನನ್ನಲದೆ ಬೇರೆ ಯಾರನ್ನೇ ಆಗಲಿ ತನ್ನ ಪ್ರಭುವೆಂದು ಸ್ವೀಕರಿಸಿದವನಿಗೆ ಸಂಕಟ ಪ್ರಾಪ್ತವಾಗಲಿ, ಭೂಮಿಯ ನಿವಾಸಿಗಳ ಮೇಲಿನ ಎಲ್ಲ ಮಮತೆಯನ್ನು ನೀಗಿದವರು ಪಾವನರು. ನಿನ್ನ ದಯಾಪರತೆಯ ಅಂಚನ್ನು ಅಂಟಿಕೊಂಡಿರುವವರು ಧನ್ಯರು.  ಬಹಾರ ಈ ಜನರೇ ಸ್ವರ್ಗದಲ್ಲಾಗಲೀ, ಭೂಮಿಯಲ್ಲಾಗಲೀ ವಾಸಿಸುವ ಜನರ ಮೇಲಿನವರು. ನೀನಲ್ಲದೆ ಇನ್ನಾವ ದೇವರಿಲ್ಲ ನೀನು ಅನಂತ, ಸರ್ವ ಸಂಪನ್ನ” ವಿಶ್ವಗಳೆಲ್ಲದರ ಪ್ರಭುವಾಗಿರುವ ನಿನಗೆ ವಂದನೆ.

-Bahá'u'lláh
-----------------------

ಬೋಧನೆಗಾಗಿ (#9495)

*“ಯಾರು ತನ್ನ ನಂಬಿಕೆಯನ್ನು ದೇವರಲ್ಲಿರಿಸುವನೋ, ದೇವರು ಆತನಿಗೆ ಅವಶ್ಯವಾದುದ್ದನ್ನು ಒದಗಿಸುವನು ಮತ್ತು ಯಾರು ದೇವರಿಗೆ ಭಯಪಡುವನೋ, ದೇವರು ಆತನಿಗೆ ಪರಿಹಾರ ಕಳುಹಿಸುವನು.”

-Bahá'u'lláh
-----------------------

ಬೋಧನೆಗಾಗಿ (#9490)

ಓ ಸ್ವಾಮಿಯೇ, ಇದೊಂದು ರೆಕ್ಕೆ ಮುರಿದಹಕ್ಕಿ, ಅದರ ಹಾರಾಟ ಬಲು ನಿಧಾನ.  ಸುಖ ಸಂಪತ್ತಿನ ಶಿಖರ ಮತ್ತು ಮುಕ್ತಿಯತ್ತ ಹಾರಾಡಲು ಸಹಾಯ ನೀಡು.  ಅತ್ಯಂತ ಆನಂದ ಹಾಗೂ ನೆಮ್ಮದಿಯಿಂದ ವಿಶಾಲವಾದ ಅಕಾಶದಲ್ಲಿ ಹಾರಾಡಲು ಅವಕಾಶವನ್ನು ಕಲ್ಪಿಸು.  ನಿನ್ನ ಹೆಸರಿನ ವೈಭವದಲ್ಲಿ ಎಲ್ಲೆಡೆಯಲ್ಲಿಯೂ ಇಂಪಾದ ಧ್ವನಿ ಮೂಡುವಂತೆ ಎಸಗು.  ನಿನ್ನ ಕರೆಯು ಪ್ರತಿಧ್ವನಿಸಿ ಕಿವಿಗಳನ್ನು ತಣಿಸಲಿ.  ನಿನ್ನ ಮಾರ್ಗವನ್ನು ವೀಕ್ಷಿಸಿ ಕಣ್ಣುಗಳು ಪ್ರಜ್ವಲಿಸುವಂತೆ ಮಾಡು.  
ಓ ಪರಮಾತ್ಮನೇ, ನಾನು ಒಬ್ಬೊಂಟಿಗ, ಒಡನಾಡಿಗರಿಲ್ಲ. ಪತಿತ ನೀನಲ್ಲದೆ ನನಗೆ ಬೇರೆ ಯಾರ ಬೆಂಬಲವೂ ಇಲ್ಲ.  ನೀನಲ್ಲದೆ ಬೇರೆ ಸಹಾಯಕರಿಲ್ಲ, ಪೋಷಕರಿಲ್ಲ, ನಿನ್ನ ಸೇವೆಗಾಗಿ ನನ್ನನ್ನು ದೂಡು.  ನಿನ್ನ ದೂತ ಗುಂಪಿನ ಮೂಲಕ ನನಗೆ ಸಹಾಯ ನೀಡು.  ನಿನ್ನ ಸಂದೇಶವನ್ನು ಸಾರುವಲ್ಲಿ ನನಗೆ ಯಶಸ್ಸು ದಯಪಾಲಿಸು.  ನಿನ್ನ ಜೀವಿಗಳಲ್ಲಿ ನಿನ್ನ ಸುಗುಣಗಳ ಪ್ರಚಾರಕ್ಕೆ ಒತ್ತಾಸೆ ಕಲ್ಪಿಸು.  ವಾಸ್ತವಕ್ಕೂ ಬಡವರ ಆಧಾರಿ ನೀನು.  ಅಲ್ಪರ ಹಿತರಕ್ಷಕ, ಪ್ರಬಲ, ಬಲಾಢ್ಯ ಹಾಗೂ ಅನಿರ್ಬಂಧಿತ.

-`Abdu'l-Bahá
-----------------------

ಬೋಧನೆಗಾಗಿ (#9492)

ಓ ಸರ್ವೋತ್ತಮನಾದ ಪರಮಾತ್ಮನೇ, ಚಕ್ರಾಧಿಪತ್ಯದ ಪ್ರಭುವೇ, ಈ ಆತ್ಮಗಳೆಲ್ಲ ನಿನ್ನ ಸ್ವರ್ಗದ ಸೈನಿಕರು.  ಸಹಾಯ ವೆಸಗು ಈ ಉನ್ನತ ಸೇನೆಯ ನೆರವಿನಿಂದ ಅವರನ್ನು ಜಯಗೊಳಿಸು.  ಅವರಲ್ಲಿ ಪ್ರತಿಯೊಬ್ಬರೂ ಒಂದೊಂದು ಸೇನಾತುಕಡಿಯಂತಾಗಿ, ದೇವರ ಅನುಗ್ರಹದಿಂಡ ಈ ದೇಶಗಳೆಲ್ಲವನ್ನೂ ಗೆಲ್ಲರಿ.  ನಿನ್ನ ದೈವದತ್ತವಾದ ಉಪದೇಶಗಳಿಂದ ಪ್ರಕಾಶಿಸುವಂತಾಗಲಿ.
ಓ ದೇವರೇ, ಅವರ ಬೆಂಬಲಿಗನಾಗಿರು.  ಸಹಾಯಕನಾಗಿರು, ಅವರಿಗೆ ಕಾನನದಲ್ಲಿ, ಬೆಟ್ಟಗಳಲ್ಲಿ, ಕಣಿವೆಯಲ್ಲಿ, ಕಾಡಿನಲ್ಲಿ, ಮೈದಾನದಲ್ಲಿ,  ಸಾಗರದಲ್ಲಿ ನೀನು ಮಿತ್ರನಾಗಿರು.  ಇದರಿಂದ ಅವರು ನಿನ್ನನ್ನು ಪವಿತ್ರ ಸ್ಫೂರ್ತಿಯಿಂದ ಪ್ರಾರ್ಥಿಸುವಂತಾಗಲಿ.  ನೀನು ಬಲಶಾಲಿ, ಪರಾಕ್ರಮಿ, ಅನಂತ ಗುಣಾಡ್ಯ ಕೇಳುವವ ಹಾಗೂ ನೋಡುವವ.

-`Abdu'l-Bahá
-----------------------

ಬೋಧನೆಗಾಗಿ (#9493)

ಓ ದೇವರೇ, ನನ್ನ ದೇವರೇ ನಿನ್ನ ನಂಬಿಕೆಯ ಸೇವಕರು ಪ್ರೀತಿಯುತ ಹಾಗೂ ಕೋಮಲವಾದ ಹೃದಯಗಳನ್ನು ಹೊಂದುವಂತೆ ನೆರವಾಗು.  ಪೃಥ್ವಿಯ ದೇಶಗಳಲ್ಲೆಲ್ಲಾ ದೈವೀ ಸಮೂಹದಿಂದ ಬರುತ್ತಿರುವ ಮಾರ್ಗದರ್ಶನದ ಬೆಳಕನ್ನು ಪಸರಿಸಲು ಅವರಿಗೆ ಸಹಾಯ ನೀಡು. ಸತ್ಯವಾಗಿಯೂ ನೀನು ಬಲಶಾಲಿ, ಸಾಮಥ್ರ್ಯವಂತ ಪರಾಕ್ರಮಿ, ಸರ್ವನಿಗ್ರಹಿ ಹಾಗೂ ಸರ್ವ ಉದಾರಿ.  ಸತ್ಯವಾಗಿಯೂ ನೀನು ಕೊಡುಗೈ ದಾನಿಯೂ, ಸಭ್ಯನೂ, ಕೋಮಲನೂ, ಅತ್ಯಂತ ದಾನಶೂರನೂ ಆಗಿರುವೆ.

-`Abdu'l-Bahá
-----------------------

ಬೋಧನೆಗಾಗಿ (#9494)

ಓ ಪ್ರಭುವೇ! ನಿನ್ನ ಧರ್ಮಕ್ಕಾಗಿ ಸಜ್ಜಾಗಿರುವ ಹೃದಯಗಳುಳ್ಳ ಆತ್ಮಗಳೆಡೆ ನಾವು ಮಾರ್ಗದರ್ಶಿಸುವಂತೆ ನೀನು ಬಾಗಿಲತೆರೆ, ಸವಲತ್ತುಗಳನ್ನು ಒದಗಿಸು, ದಾರಿಯ ಸುಸಜ್ಜಿತಗೊಳಿಸು, ಹಾದಿಯ ಸುರಕ್ಷಿತಗೊಳಿಸು. ಸತ್ಯವಾಗಿಯೂ ನೀನು ಕೃಪಾಳುವೂ, ಮಹಾ ಉದಾರಿಯೂ, ಸರ್ವಸಕ್ತನೂ ಆಗಿರುವೆ.

-`Abdu'l-Bahá
-----------------------

ಬೋಧನೆಗಾಗಿ (#9491)

ಓ ನನ್ನ ದೇವರೇ, ನಿನ್ನ ಸೇವಕರು ನಿನ್ನ ನುಡಿಯನ್ನು ಉನ್ನತಿಗೇರಿಸುವಂತೆಯೂ, ವ್ಯರ್ಥ ಮತ್ತು ಮಿಥ್ಯವಾದವುಗಳನ್ನು ಖಂಡಿಸುವಂತೆಯೂ, ಸತ್ಯವನ್ನು ಸ್ಥಾಪಿಸುವಂತೆಯೂ, ನಿನ್ನ ಪವಿತ್ರ ವಚನಗಳನ್ನು ದೂರದೂರವರೆಗೆ ಪಸರಿಸುವಂತೆಯೂ, ನಿನ್ನ ಭವ್ಯತೆಯನ್ನು ಪ್ರಕಾಶಪಡಿಸುವಂತೆಯೂ ಹಾಗೂ ಧರ್ಮಶೀಲರ ಹೃದಯಗಳಲ್ಲಿ ಪ್ರಾತಃಕಾಲದ ಬೆಳಕು ಗೋಚರಿಸುವಂತೆಯೂ ನೀನು ಸಹಾಯ ಮಾಡು. ನೀನು, ನಿಜವಾಗಿಯೂ, ಉದಾರಿಯೂ, ಕ್ಷಮಾದಾತನೂ ಆಗಿರುವೆ.

-`Abdu'l-Bahá
-----------------------

