ಪ್ರಯಾಣಕ್ಕಾಗಿ (#9456)

ಓ ನನ್ನ ಪರಮಾತ್ಮನೇ, ನಿನ್ನ ಕೃಪೆಯಿಂದ ನಾನಿಂದ ಪ್ರಾತಃಕಾಲ ಎಚ್ಚೆತ್ತಿದ್ದೇನೆ.  ನಿನ್ನಲ್ಲಿ ಪೂರ್ಣ ವಿಶ್ವಾಸವನ್ನಿಟ್ಟು ಮನೆಯಿಂದ ತೆರಳಿದ್ದೇನೆ.  ನಿನ್ನ ಆಶ್ರಯಕ್ಕೆ ಅಧೀನನೂ ಹೌದು.  ಅಂದ ಮೇಲೆ ನಿನ್ನ ಕರುಣೆಯ ಸ್ವರ್ಗವನ್ನು ನನಗೆ ಅನುಗ್ರಹಿಸು.  ನಿನ್ನ ಕಡೆಯಿಂದ ಆಶೀರ್ವಾದ ಹೊರಹೊಮ್ಮಲಿ.  ನಿನ್ನ ರಕ್ಷಣೆಗೆ ನಾನು ಒಪ್ಪಿಸಿಕೊಂಡಿರುವೆನು.  ನಿನ್ನ ರಕ್ಷಣೆಯಿಂದ, ನಾನು ಮನೆಯಿಂದ ಹೇಗೆ ಸುರಕ್ಷಿತವಗಿ ಹೊರಬಂದೆನೋ ಅದೇ ಬಗೆಯಾಗಿ ನನ್ನ ಚಿಂತನೆಯನ್ನೆಲ್ಲಾ ನಿನ್ನಲ್ಲಿಯೇ ದೃಢವಾಗಿ ನೆಟ್ಟು ಮನೆಯನ್ನು ಸುಖವಾಗಿ ಸೆರುವಂತೆ ಮಾಡು. ಹೋಲಿಕೆಗೆ ಅತೀತನಾಗಿರುವ, ಏಕಮಾತ್ರ ಸರ್ವಜ್ಞ ಹಾಗೂ ಸಕಲ ಗುಣಸಂಪನ್ನನಾದ ದೇವರು ನೀನಲ್ಲದೆ ಮತ್ತ್ಯಾರೂ ಇಲ್ಲ.

-Bahá'u'lláh
-----------------------

ಪ್ರಯಾಣಕ್ಕಾಗಿ (#9457)

ಓ ದೇವರೇ, ನನ್ನ ದೇವರೇ, ನಿನ್ನ ಪ್ರೇಮಪಾಶವನ್ನು ಬಿಗಿದಪ್ಪಿಕೊಂಡು ನನ್ನ ಮನೆಯಿಂದ ಹೊರಟಿರುವೆ. ನಿನ್ನ ರಕ್ಷಣೆಗೆ ಹಾಗೂ ಲಕ್ಷ್ಯಕ್ಕೆ ಪೂರ್ಣವಾಗಿ ಒಳಗಾಗಿರುವೆ.  ನಿನ್ನ ಪ್ರೀತಿಗೆ ಪಾತ್ರರಾದವರನ್ನು ಯಾವ ಬಗೆಯಿಂದ ರಕ್ಷಿಸುತ್ತಿರುವೆಯೋ ಅದೇ ಪ್ರೀತಿಯಿಂದ ನಾನು ದುರ್ಮಾರ್ಗಿಯಾಗದಂತೆ, ನಿಷಿದ್ಧ ನಡತೆಗಳಿಂದ ಕಾಪಾಡು, ತಿಳಿಗೇಡಿಗಳ ದುಷ್ಟತನದಿಂದ ಉಳಿಸು, ನಿನ್ನಿಂದ ದೂಡಲ್ಪಟ್ಟ ಕುಹಕಿಗಳಿಂದ ದೂರವಿಡು.  ನಿನ್ನ ಔದಾರ್ಯ ಹಾಗೂ ಅದರದಿಂದ ನನ್ನನ್ನು ಸುಖವಾಗಿರಿಸು, ಆಮೇಲೆ ನನ್ನನ್ನು ನಿನ್ನ ಪ್ರಭಾವ ಮತ್ತು ಬಲದಿಂದ ನನ್ನ ಮನೆಗೆ ಹಿಂತಿರುಗುವಂತೆ ಮಾಡು.  ನೀನು ಸತ್ಯವಾಗಿಯೂ ಸರ್ವಶಕ್ತ ಸಂಕಟ ನಿವಾರಕ ಸ್ವಯಂಪೂರ್ಣ.

-Bahá'u'lláh
-----------------------

