ನಿರ್ಲಿಪ್ತತೆಗಾಗಿ (#9436)

ಓ ಪ್ರಭುವೇ! ನಿನ್ನಾಶ್ರಯಕ್ಕಾಗಿ ನಾನು ನಿನ್ನಲ್ಲಿಗೇ ಬರುತ್ತಿದ್ದೇನೆ, ನಿನ್ನ ಎಲ್ಲಾ ಚಿಹ್ನೆಗಳತ್ತ ನನ್ನ ಹೃದಯವನ್ನು ತೆರುಗಿಸಿದ್ದೇನೆ. 
ಓ ಪ್ರಭುವೇ! ಪ್ರಯಾಣಿಸುತ್ತಿರಲಿ, ಅಥವಾ ಮನೆಯಲ್ಲಿರಲಿ, ನನ್ನ ವ್ಯತ್ತಿಯಲ್ಲಿರಲಿ ಅಥವಾ ನನ್ನ ಕೆಲಸದಲ್ಲಿರಲಿ ನನ್ನ ಸಂಪೂರ್ಣ ಭರವಸೆಯನ್ನು ನಿನ್ನಲಿರಿಸುವೆ.
ಓ ನಿನ್ನ ಕರುಣೆಯಲ್ಲಿ ಯಾರೂ ನಿನ್ನನ್ನು ಮೀರಿಸಲಾಗದವನೇ, ಎಲ್ಲಾ ವಿಷಯಗಳಿಂದಲೂ ಸ್ವತಂತ್ರವಾಗಿರುವಂತೆ ಅವಶ್ಯವಾದುದನ್ನು ಒದಗಿಸುವ ನಿನ್ನ ಸಹಾಯವನ್ನು ನನಗೆ ದಯಪಾಲಿಸು.
ಓ ಪ್ರಭುವೇ! ನೀನು ಇಚ್ಛಿಸಿದಂತೆ, ನನ್ನ ಪಾಲಿನದನ್ನು ನನಗೆ ಅನುಗ್ರಹಿಸು, ಹಾಗೂ ನನಗೆ ನೀನು ವಿಧಿಸಿರುವುದರಲ್ಲೇ ನಾನು ತೃಪ್ತಿಪಡುವಂತೆ ಮಾಡು.  ಆಜ್ಞಾಪಿಸುವ ಸಂಪೂರ್ಣ ಅಧಿಕಾರ ನಿನ್ನದಾಗಿದೆ.

-The Báb
-----------------------

ನಿರ್ಲಿಪ್ತತೆಗಾಗಿ (#9437)

ಓ ನನ್ನ ದೇವರೇ, ನನ್ನ ಪ್ರಭುವೇ ಮತ್ತು ನನ್ನ ಒಡೆಯನೇ! ನಾನು ನನ್ನ ಬಂಧು ಬಳಗದವರಿಂದ ನಿರ್ಲಿಪ್ತನಾಗಿದ್ದೇನೆ ಮತ್ತು ನಿನ್ನ ಮೂಲಕ ಭೂ ನಿವಾಸಿಗಳೆಲ್ಲರಿಂದ ಸ್ವತಂತ್ರನಾಗಲು ಕೋರುತ್ತಿದ್ದೇನೆ ಹಾಗೂ ನಿನ್ನ ದೃಷ್ಟಿಯಲ್ಲಿ ಶ್ಲಾಘನೀಯವಾದುದನ್ನು ಪಡೆಯಲು ಸದಾ ಸಿದ್ಧನಿದ್ದೇನೆ.  ನಿನ್ನನ್ನಲ್ಲದೆ ಬೇರೆಲ್ಲದರಿಂದ ಸ್ವತಂತ್ರನಾಗಿರುವಂತೆ  ಒಳ್ಳೆಯದನ್ನು ಅನುಗ್ರಹಿಸು ಮತ್ತು ನಿನ್ನ ಸೀಮಾತೀತ ಅನುಗ್ರಹಗಳಲ್ಲಿ ಪುಷ್ಕಳಪಾಲನ್ನು ನನಗೆ ದಯಪಾಲಿಸು.  ನಿಜವಾಗಿಯೂ, ನೀನು ಸಮೃದ್ಧ ಅನುಗ್ರಹದ ಪ್ರಭುವಾಗಿರುವೆ.

-The Báb
-----------------------

