ಐಕ್ಯತೆಗಾಗಿ (#9503)

ಇಡೀ ಭೂಮಿಯನ್ನೇ ಆವರಿಸುವಂತಹ ಐಕ್ಯತೆಯ ಬೆಳಕನ್ನು ದೇವರು ದಯಪಾಲಿಸಲಿ.  “ದೇವರದೇ ಸಾಮ್ರಾಜ್ಯ”ವೆಂಬ ಮುದ್ರೆಯು ಎಲ್ಲ ಜನಗಳ ಹುಬ್ಬುಗಳ ಮೆಲೂ ಒತ್ತುವಂತಾಗಲಿ.

-Bahá'u'lláh
-----------------------

ಐಕ್ಯತೆಗಾಗಿ (#9504)

ಓ ನನ್ನ ದೇವರೇ, ಓ ನನ್ನ ದೇವರೇ, ನಿನ್ನ ಸೇವಕರ ಹೃದಯಗಳನ್ನು ಮಿಲನಗೊಳಿಸು.  ನಿನ್ನ ಘನ ಉದ್ದಿಶ್ಯವನ್ನು ಅವರಿಗೆ ಪ್ರಕಟಿಸು. ಅವರು ನಿನ್ನ ಆಜ್ಞೆಯನ್ನು ಪಾಲಿಸಲಿ.  ನಿನ್ನ ಶಾಸನಗಳನ್ನು ಅನುಸರಿಸಲಿ.  ಭಗವಂತನೇ, ಅವರ ಪ್ರಯತ್ನಗಳಿಗೆ ಸಹಾಯವೆಸಗು.  ನಿನ್ನ ಸೇವೆ ಸಲ್ಲಿಸಲು ಶಕ್ತಿಯನ್ನು ಕೊಡು. ಅವರನ್ನು ಅವರಷ್ಟಕ್ಕೇ ಬಿಡಬೇಡ.   ಜ್ಞಾನದೀವಿಗೆಯಿಂದ ಅವರ ಹೆಜ್ಜೆಯನ್ನು ಮುನ್ನಡೆಸು.  ಪ್ರೀತಿಯಿಂದ ಅವರ ಹೃದಯಗಳನ್ನು ಸ್ಫೂರ್ತಿಗೊಳಿಸು.  ಸತ್ಯವಾಗಿಯೂ ನೀನು ಅವರ ಸಹಾಯಕ ಮತ್ತು ಪ್ರಭು.

-Bahá'u'lláh
-----------------------

ಐಕ್ಯತೆಗಾಗಿ (#9505)

ಓ ದೇವರೇ, ನಿನಗೆ ಕೀರ್ತಿಯುಂಟಾಗಲಿ, ಮಾನವ ವರ್ಗಕ್ಕೆ ನಿನ್ನ ಪ್ರೀತಿಯ ಪ್ರಸನ್ನತೆ ದೊರೆಯಲಿ.  ನೀನು ನಮ್ಮ ಜೀವ ಹಾಗೂ ಬೆಳಕು. ಆದ್ದರಿಂದ ನಿನ್ನ ಮಾರ್ಗದಲ್ಲಿ ನಿನ್ನ ಸೇವಕರನ್ನು ಕರೆದೊಯ್ಯು. ನಮ್ಮನ್ನು ನಿನ್ನಲ್ಲಿ ಸಿರಿವಂತರನ್ನಾಗಿಸು.  ನಿನ್ನ ಹೊರತು ಮಿಕ್ಕೆಲ್ಲವುಗಳಿಂದಲೂ ಪಾರುಮಾಡು.
ಓ ದೇವರೇ. ನಿನ್ನ ಏಕತ್ವವನ್ನು ನಮಗೆ ಬೋಧಿಸು, ನಿನ್ನ ಐಕ್ಯತೆಯ ಸ್ವರೂಪದ ಗ್ರಹಿಕೆಯಾಗುವಂತೆ ನೋಡು, ನಿನ್ನನ್ನಲ್ಲದೆ ಯಾರ ದರ್ಶನವಾಗದಂತೆಯೂ ಮಾಡು.  ನೀನು ದಯಾಪರ ಹಾಗೂ ದಾನವೀರ.  ಓ ಪರಮಾತ್ಮನೇ, ನಿನ್ನ ಪ್ರೀತಿಪಾತ್ರರ ಹೃದಯಗಳಲ್ಲಿ ಪ್ರೇಮದ ಕಿಚ್ಚನ್ನೆಬ್ಬಿಸು.  ನಿನ್ನ ಹೊರತಾಗಿ ಬೇರಾವ ಯೋಚನೆಯನ್ನು ಈ ಕಿಚ್ಚು ದಹಿಸುವಂತಾಗಲಿ. 
ನಿನ್ನ ಉನ್ನತ ಸ್ಥಿತಿಯನ್ನು ನಮಗೆ ಸಾಕ್ಷ್ಯತ್ಕರಿಸು.  ಎಂದಿನಂತೆ ಮುಂದೆಯೂ ನೀನಲ್ಲದೆ ಬೇರೆ ಯಾವ ದೇವರೂ ಇಲ್ಲವೆಂದು ತಿಳಿಯಪಡಿಸು ನಿಜಕ್ಕೂ ನಿನ್ನಲ್ಲಿ ನಾವು ಸಮಾಧಾನ ಪಡುವೆವು ಹಾಗೂ ಶಕ್ತಿಯನ್ನು ಗಳಿಸುವೆವು.

-Bahá'u'lláh
-----------------------

ಐಕ್ಯತೆಗಾಗಿ (#9506)

ಓ ಪರಮಾತ್ಮನೇ, ಸ್ವಾಮಿಯೇ, ನಿನ್ನ ಕರುಣೆ ಈ ಆತ್ಮಗಳ ಮೇಲೆ ಬಂದಿಳಿಯಲಿ ಎಂದು ಕೋರುವೆ.  ಸೆರಗೊಡ್ಡಿ ಬೇಡುವೆ.  ನಿನ್ನ ಉಪಕಾರ ಹಾಗೂ ಸತ್ಯ ಸಾಕ್ಷಾತ್ಕಾರಕ್ಕೆ ಅವರನ್ನು ಅರ್ಹರನ್ನಾಗಿ ಮಾಡು.  ಹೃದಯಗಳನ್ನು ಒಂದುಗೂಡಿಸು ಎಲ್ಲ ಆತ್ಮಗಳನ್ನು ಏಕತ್ರಗೊಳಿಸು.  ನಿನ್ನ ಪವಿತ್ರ ಹಾಗೂ ಏಕೀಭಾವದ ಮೂಲಕ ಚಿತ್ತವನ್ನು ಆನಂದಮಯವನ್ನಾಗಿ ಮಾಡು, ನಿನ್ನ ಏಕಮೂರ್ತಿ ಸ್ವರೂಪದ ಜ್ಯೋತಿಯಿಂದ ಈ ಮುಖಗಳನ್ನು ಬೆಳಗಿಸು. ನಿನ್ನ ಪರಿಸರದ ಸೇವೆಗಾಗಿ ನಿನ್ನ ಸೇವಕರ ಬಲವನ್ನು ಹೆಚ್ಚಿಸು ಪ್ರಭುವೇ.  ಅಪಾರ ದಯಾಮಯನಾದವನೂ ನೀನು. ಕ್ಷಮಿಸುವವನೂ ಮತ್ತು ಮುನ್ನಿಸುವವನೂ ನೀನೇ.  ನಮ್ಮ ಪಾಪಗಳನ್ನು ಕ್ಷಮಿಸು.  ನಮ್ಮ ಲೋಪದೋಷಗಳನ್ನು ಮನ್ನಿಸು.  ನಿನ್ನ ಕರುಣೆಯ ಸಾಮ್ರಾಜ್ಯದತ್ತ ನಮ್ಮ ಗಮನವನ್ನು ಹರಿಯಿಸುವಂತೆ ಮಾಡಿ, ನಿನ್ನ ಬಲ ಹಾಗೂ ಅಧಿಕಾರಕ್ಕೆ ತಲೆಬಾಗಿಸಿ, ನಿನ್ನ ಕೀರ್ತಿ ಮತ್ತು ಪ್ರಸನ್ನತೆಗೆ ನಮ್ರತೆಯಿಂದ ಶರಣಾಗುವಂತೆ ನನ್ನನ್ನು ಅನುಗ್ರಹಿಸು.  ಭಗವಂತನೇ, ಸಮುದ್ರದ ಆಲೆಗಳಂತೆ ನಮ್ಮನ್ನು ಮಾಡು.  ಉದ್ಯಾನವನದ ಪುಷ್ಪಗಳಂತೆ ಪರಿವರ್ತಿಸು.  ನಿನ್ನ ಪ್ರೇಮದ ಅಪಾರ ಉದಾರತೆಯ ಮೂಲಕ ಐಕ್ಯತೆ ಹಾಗೂ ಸಮ್ಮತಿಗಾಗಿ ಏಸಗು.  ನಿನ್ನ ಏಕತ್ವ ಸ್ವರೂಪದ ಸೂಚನೆಯ ಮೂಲಕ ನಮ್ಮ ಹೃದಯಗಳನ್ನು ವಿಶಾಲಗೊಳಿಸು.  ಎಲ್ಲ ಮಾನವ ವರ್ಗದವರೂ ಕೀರ್ತಿಯ ಉತ್ತುಂಗ ಶಿಖರದಿಂದ ಪ್ರಜ್ವಲಿಸುವ ನಕ್ಷತ್ರಗಳಂತೆ ನಿನ್ನ ಜೀವಿತ ಸೌರಭದ ಮರದಲ್ಲಿ ಬೆಳೆದ ಶ್ರೇಷ್ಠ ಹಣ್ಣುಗಳೋಪಾದಿಯಲ್ಲಿ ನಿರ್ಮಿಸು.  ಸತ್ಯವಾಗಿಯೂ ನೀನು ಸರ್ವಶಕ್ತ, ಸ್ವಯಂಪರಿಪೂರ್ಣ, ದಾನಿ, ಮನ್ನಿಸುವಾತ, ಕ್ಷಮಿಸುವವ ಸರ್ವಾಂತರ್ಯಾಮಿ ಸೃಷ್ಟಿಕರ್ತ

-`Abdu'l-Bahá
-----------------------

